Discrimination in healthcare and social determinants of health – ಆರೋಗ್ಯ ರಕ್ಷಣೆ ಮತ್ತು ಆರೋಗ್ಯದ ಸಾಮಾಜಿಕ ನಿರ್ಣಾಯಕಗಳಲ್ಲಿ ತಾರತಮ್ಯ
Speaker: Dr. Sylvia Karpagam – a public health doctor and researcher working in Karnataka
Description: She shares her concerns about how social determinants affect health and healthcare outcomes. This includes discrimination at the level of education such as denying education to women wearing hijabs. It also includes acces to water, sanitation, nutrition etc.
According to her, people should be encouraged to eat diverse foods which includes eggs, milk, fish, pulse, vegetables etc. Emphasizing vegetarianism and making available only cereals like rice, wheat, millets in the PDS may not be conducive to health.
ಮಾತನಾಡುವವರು: ಡಾ. ಸಿಲ್ವಿಯಾ ಕರ್ಪಗಂ – ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮುದಾಯಿಕ ಆರೋಗ್ಯ ವೈದ್ಯರು ಮತ್ತು ಸಂಶೋಧಕರು.
ವಿವರಣೆ: ಸಾಮಾಜಿಕ ನಿರ್ಣಾಯಕಗಳು ಹೇಗೆ ಆರೋಗ್ಯ ಹಾಗೂ ಆರೋಗ್ಯ ರಕ್ಷಣೆಯ ಫಲಿತಾಂಶಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬ ತಮ್ಮ ಕಳವಳವನ್ನು ಇವರು ಹಂಚಿಕೊಳ್ಳುತ್ತಾರೆ. ಹಿಜಾಬ್ ಧರಿಸುವ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುವುದು ಸೇರಿದಂತೆ ಇದು ಶಿಕ್ಷಣದ ಹಂತದಲ್ಲೂ ನಡೆಯುವ ತಾರತಮ್ಯವನ್ನು ಒಳಗೊಳ್ಳುತ್ತದೆ. ಇದು ನೀರು, ನೈರ್ಮಲ್ಯ, ಪೌಷ್ಟಿಕಾಂಶ ಇತ್ಯಾದಿಗಳಿಗೆ ಪ್ರವೇಶಿಕೆಯನ್ನೂ ಸಹ ಒಳಗೊಳ್ಳುತ್ತದೆ.
ಇವರ ಪ್ರಕಾರ, ಜನರು ಮೊಟ್ಟೆ, ಹಾಲು, ಮೀನು, ಕಾಳುಗಳು, ತರಕಾರಿಗಳು ಇತ್ಯಾದಿ ವೈವಿಧ್ಯಮಯ ಆಹಾರವನ್ನು ಸೇವಿಸುವಂತೆ ಪ್ರೋತ್ಸಾಹಿಸಬೇಕು. ಸಸ್ಯಹಾರಿತನಕ್ಕೆ ಮಾತ್ರ ಒತ್ತು ನೀಡಿ, ಪಿಡಿಎಸ್‌ನಲ್ಲಿ ಅಕ್ಕಿ, ಗೋಧಿ ಮತ್ತು ರಾಗಿಯಂತಹ ಧಾನ್ಯಗಳನ್ನು ಮಾತ್ರ ದೊರಕುವಂತೆ ನೋಡಿಕೊಳ್ಳುವುದು ಆರೋಗ್ಯಕ್ಕೆ ಅಷ್ಟಾಗಿ ಸಹಕಾರಿಯಾಗುವುದಿಲ್ಲ ಎಂದು ಇವರು ಹೇಳುತ್ತಾರೆ.
Health services have to be sensitive to women from vulnerable communities – ದುರ್ಬಲ ಸಮುದಾಯಗಳ ಮಹಿಳೆಯರಿಗೆ ಆರೋಗ್ಯ ಸೇವೆಗಳು ಸಂವೇದನಾಶೀಲವಾಗಿರಬೇಕು – ಬಹುತ್ವಕ್ಕಾಗಿ ವೈದ್ಯರು
Speaker: Dr. Veena Shatrugna is retired Deputy Director, National Institute of Nutrition.
Description: She explains how the biases of the healthcare system in terms of gender, caste, religion etc. are on display in the outpatient departments of our hospitals. Doctors very often exhibit contempt for poor women’s health issues especially if she comes from the minority community. Solutions offered are usually family planning. Women find it difficult to give “Proper” histories which fit into the medical framework of the doctor. Called ‘unreliable’ it is not surprising that many of their problems go unattended. She also talks about how the Covid pandemic ripped through the social fabric, of this country, exposing the stark discrimination faced by the poor and migrant workers.
ಮಾತನಾಡುವವರು: ಡಾ. ವೀಣಾ ಶತ್ರುಘ್ನ – ಇವರು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ನಿವೃತ್ತ ಉಪ ನಿರ್ದೇಶಕರಾಗಿದ್ದಾರೆ.
ವಿವರಣೆ: ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಲಿಂಗ, ಜಾತಿ, ಧರ್ಮ ಹಾಗೂ ಇತ್ಯಾದಿಗಳ ಆಧಾರದ ಮೇಲೆ ಆರೋಗ್ಯ ವ್ಯವಸ್ಥೆಯ ತಾರತಮ್ಯ ಹೇಗಿರುತ್ತದೆ ಎಂಬುದನ್ನು ಇವರು ವಿವರಿಸುತ್ತಾರೆ. ಬಡ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ಅವರು ಅಲ್ಪಸಂಖ್ಯಾತ ಸಮುದಾಯದವರಾಗಿದ್ದರೆ ವೈದ್ಯರು ಅವರ ಮೇಲೆ ತಮ್ಮ ತಾತ್ಸಾರವನ್ನು ವ್ಯಕ್ತಪಡಿಸುತ್ತಾರೆ. ಇವರಿಗೆ ಸಾಮಾನ್ಯವಾಗಿ ನೀಡುವ ಪರಿಹಾರವು ಕುಟುಂಬ ಯೋಜನೆ ಮಾಡಿಕೊಳ್ಳಬೇಕು ಎಂಬುದಾಗಿರುತ್ತದೆ. ವೈದ್ಯರ ವೈದ್ಯಕೀಯ ಪರಿಧಿಗೆ ಎಟುಕುವ “ಸರಿಯಾದ” ಇತಿಹಾಸದ ವಿವರಣೆಯನ್ನು ನೀಡಲು ಮಹಿಳೆಯರು ಕಷ್ಟಪಡುತ್ತಾರೆ. ಇವರ ವಿವರಣೆಯನ್ನು “ವಿಶ್ವಾಸಾರ್ಹವಲ್ಲ” ಎಂದು ಕರೆಯಲ್ಪಡುವುದರಿಂದ ಇವರ ಅನೇಕ ಸಮಸ್ಯೆಗಳು ಗಮನಕ್ಕೆ ಬಾರದೆಯೇ ಹೋಗುವುದು ಆಶ್ಚರ್ಯವೇನಲ್ಲ.
ಕೋವಿಡ್ ಸಾಂಕ್ರಮಿಕವು ಹೇಗೆ ಈ ದೇಶದ ಸಾಮಾಜಿಕ ಚೌಕಟ್ಟನ್ನು ಬೇಧಿಸಿ, ಬಡವರು ಹಾಗೂ ವಲಸಿಕ ಕಾರ್ಮಿಕರು ಎದುರಿಸುತ್ತಿರುವ ಕಠಿಣ ತಾರತಮ್ಯವನ್ನು ತೋರಿಸಿದೆ ಎಂಬುದರ ಕುರಿತು ಸಹ ಇವರು ಮಾತನಾಡುತ್ತಾರೆ
Nutrition policies have to be based on science and evidence, not on ideology – ಪೌಷ್ಟಿಕಾಂಶ ನೀತಿಗಳು ವೈಜ್ಞಾನಿಕವಾಗಿ ಹಾಗೂ ಪುರಾವೆಗಳ ಆಧಾರದ ಮೇಲಿರಬೇಕೆ ಹೊರತು ಒಂದು ನಿರ್ದಿಷ್ಟ ಸೈದ್ಧಾಂತಿಕ ಆಧಾರದ ಮೇಲಲ್ಲ – ಬಹುತ್ವಕ್ಕಾಗಿ ವೈದ್ಯರು
Speaker: Dr. Bharatashree is a general practitioner who looks at health from a holistic perspective.
Description: He argues that nutrition in Karnataka is too important an issue to be taken lightly. Science and evidence have to be the basis for nutrition policies rather than religious or ideological basis such as sattvik, tamassik and rajasik foods.
He says that if sattvik foods indeed lead to less violence, then those pushing for these foods should not be practicing caste based discrimination.
ಮಾತನಾಡುವವರು: ಡಾ. ಭಾರತಶ್ರೀ – ಇವರು ಸಾಮಾನ್ಯ ವೈದ್ಯರಾಗಿದ್ದು ಆರೋಗ್ಯವನ್ನು ಸಮಗ್ರ ದೃಷ್ಟಿಕೋನದಿಂದ ನೋಡುತ್ತಾರೆ.
ವಿವರಣೆ: ಕರ್ನಾಟಕದಲ್ಲಿ ಪೌಷ್ಟಿಕಾಂಶ ಎನ್ನುವುದು ಸರ್ವೇ ಸಾಧಾರಣ ಸಮಸ್ಯೆ ಎಂದು ಪರಿಗಣಿಸಲಾಗದಷ್ಟು ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ ಎಂದು ಇವರು ವಾದಿಸುತ್ತಾರೆ. ಯಾವುದೇ ಪೌಷ್ಟಿಕಾಂಶ ನೀತಿಗಳಿಗೆ ವಿಜ್ಞಾನ ಮತ್ತು ಪುರಾವೆಗಳು ಆಧಾರವಾಗಿರಬೇಕೆ ಹೊರತು ಸಾತ್ವಿಕ, ತಾಮಸಿಕ, ಮತ್ತು ರಾಜಸಿಕ ಆಹಾರಗಳು ಎಂಬಂತಹ ಧಾರ್ಮಿಕ ಅಥವಾ ಸೈದ್ಧಾಂತಿಕ ಆಧಾರಗಳಲ್ಲ.
ಸಾತ್ವಿಕ ಆಹಾರ ನಿಜವಾಗಿಯೂ ಹಿಂಸೆಯನ್ನು ತಗ್ಗಿಸುತ್ತದೆ ಎನ್ನುವುದಾದರೆ, ಈ ಆಹಾರ ಕ್ರಮವನ್ನು ಹೇರುತ್ತಿರುವವರು ಯಾವುದೇ ರೀತಿಯ ಜಾತಿ ಆಧಾರಿತ ತಾರತಮ್ಯವನ್ನು ಆಚರಿಸಬಾರದು ಎಂದು ಇವರು ಹೇಳುತ್ತಾರೆ. ಅಷ್ಟೇ ಅಲ್ಲದೆ ಸಾತ್ವಿಕ ಆಹಾರ ಸೇವಿಸುವ ಧಾರ್ಮಿಕ ಮುಖಂಡರುಗಳ ಭಕ್ತರೂ ಸಹ ದ್ವಂದ್ವ ನೀತಿ ಅನುಸರಿಸುತ್ತಾರೆ ಎಂದು ಪ್ರತಿಪಾದಿಸುತ್ತಾರೆ.
Importance of diversity for population health – ಜನಸಂಖ್ಯಾ ಆರೋಗ್ಯಕ್ಕೆ ವೈವಿಧ್ಯತೆಯ ಪ್ರಾಮುಖ್ಯತೆ
Speaker: Dr. Mohan Rao, retired Professor, Centre of Social Medicine and Community Health, Jawaharlal Nehru University, New. Delhi and currently based in Karnataka.
Description: Dr. Mohan Rao emphasises the importance of diversity for the health of populations.
Using examples from historical demography, he argues that the greater there is inter-mingling in populations, the better it is for population health.
He also makes the point that the centralised NEET examination for medical entrance has reduced the diversity that existed among medical graduates in Tamil Nadu, making it, as in other states, more upper-caste.
ಮಾತನಾಡುವವರು: ಡಾ.ಮೋಹನ್ ರಾವ್, ನಿವೃತ್ತ ಪ್ರಾಧ್ಯಾಪಕರು, ಸೆಂಟರ್ ಫಾರ್ ಸೋಷಿಯಲ್ ಮೆಡಿಸಿನ್ ಆಂಡ್ ಕಮ್ಯೂನಿಟಿ ಹೆಲ್ತ್, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ನವ ದೆಹಲಿ, ಮತ್ತು ಇವರು ಪ್ರಸ್ತುತ ಕರ್ನಾಟಕದಲ್ಲಿ ನೆಲೆಸಿದ್ದಾರೆ.
ವಿವರಣೆ: ಜನಸಂಖ್ಯೆಯ ಆರೋಗ್ಯಕ್ಕೆ ವೈವಿಧ್ಯತೆಯ ಪ್ರಾಮುಖ್ಯತೆಯ ಕುರಿತು ಡಾ. ಮೋಹನ್ ರಾವ್ ಅವರು ಒತ್ತಿ ಹೇಳುತ್ತಾರೆ. ಐತಿಹಾಸಿಕ ಜನಸಂಖ್ಯಾಶಾಸ್ತ್ರದ ಉದಾಹರಣೆಗಳನ್ನು ಉಲ್ಲೇಖಿಸುತ್ತಾ, ಡಾ. ಮೋಹನ್ ರಾವ್, ಜನಸಂಖ್ಯೆಯಲ್ಲಿ ಹೆಚ್ಚು ಪರಸ್ಪರ ಬೆರೆಯುವಿಕೆ ಇದ್ದರೆ ಅದು ಜನರ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದು ವಾದಿಸುತ್ತಾರೆ.
ವೈದ್ಯಕೀಯ ಪ್ರವೇಶಾತಿಗಾಗಿ ಮಾಡಲಾಗಿರುವ ಕೇಂದ್ರಿಕೃತ ನೀಟ್ (ಎನ್‌ಇಇಟಿ) ಪರೀಕ್ಷೆಗಳು ತಮಿಳುನಾಡಿನಲ್ಲಿ ವೈದ್ಯಕೀಯ ಪದವೀಧರರ ನಡುವೆ ಇದ್ದ ವೈವಿಧ್ಯತೆಯನ್ನು ಕಡಿಮೆಗೊಳಿಸಿ, ಇತರೆ ರಾಜ್ಯಗಳಂತೆ, ಇದನ್ನೂ ಸಹ ಹೆಚ್ಚು ಮೇಲ್ಜಾತೀಕರಿಸಿದೆ.
Rising Caesarian sections and hysterectomies are a cause for concern – ಹೆಚ್ಚುತ್ತಿರುವ ಸಿಸೇರಿಯನ್ ಸೆಕ್ಷನ್‌ಗಳು (ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ತೆಗೆಯುವುದು) ಹಾಗೂ ಹಿಸ್ಟೆರೆಕ್ಟೊಮಿ (ಗರ್ಭಕೋಶದ ಶಸ್ತ್ರಚಿಕಿತ್ಸೆ) ಗಳು ಕಳವಳಕ್ಕೆ ಕಾರಣವಾಗಿವೆ
Speaker: Dr. Veena Shatrugna is retired Deputy Director, National Institute of Nutrition.
Description: She explains how in the absence of regulation in the private hospitals, women have been subjected to unnecessary Hysterectomies and Caesarian sections in small towns and nursing homes over the last few decades.
There is no doubt that these surgeries were life savers, but when carried out without proper indications, they result in huge expenses, and irreversible long term health consequences. Most of these are not even documented.
Caesarian sections can delay the young mothers return to normal life, and lifelong risk of complications in subsequent pregnancies.
Hysterectomies are being carried out in the age groups as early as 25-35years. This leads to the onset of early menopause, with osteoporosis, body pains, depression to name a few.
Dr. Veena points to the callousness of the health system when it deals with women’s lives.
ಮಾತನಾಡುವವರು: ಡಾ. ವೀಣಾ ಶತ್ರುಘ್ನ – ಇವರು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆಯ ನಿವೃತ್ತ ಉಪ ನಿರ್ದೇಶಕರಾಗಿದ್ದಾರೆ.
ವಿವರಣೆ: ಕಳೆದ ಹಲವು ದಶಕಗಳಲ್ಲಿ ಸಣ್ಣ ಪಟ್ಟಣಗಳಲ್ಲಿ ಹಾಗೂ ನರ್ಸಿಂಗ್ ಹೋಂಗಳಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣದ ಗೈರು ಹಾಜರಿಯ ಪರಿಣಾಮ ಹೇಗೆ ಅದೆಷ್ಟೋ ಹೆಣ್ಣು ಮಕ್ಕಳು ಅನಾವಶ್ಯಕ ಸಿಸೇರಿಯನ್ ಸೆಕ್ಷನ್‌ಗಳು ಮತ್ತು ಅನಾವಶ್ಯಕ ಗರ್ಭಕೋಶವನ್ನು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದರ ಕುರಿತು ಇವರು ವಿವರಿಸುತ್ತಾರೆ.
ಹೌದು, ಶಸ್ತ್ರಚಿಕಿತ್ಸೆಗಳು ಪ್ರಾಣಗಳನ್ನು ಉಳಿಸಿವೆ ಎಂಬುದರಲ್ಲಿ ಸಂಶಯವಿಲ್ಲ; ಆದರೆ, ಸರಿಯಾದ ಸೂಚನೆಗಳಿಲ್ಲದೆ ಈ ಇವುಗಳನ್ನು ಮಾಡಿದರೆ ಇದಕ್ಕೆ ದೊಡ್ಡ ವೆಚ್ಚವನ್ನು ಭರಿಸಬೇಕಾಗುತ್ತದೆ ಮಾತ್ರವಲ್ಲದೆ, ಸರಿಪಡಿಸಲಾಗದ ಧೀರ್ಘಕಾಲಿಕ ಆರೋಗ್ಯ ಪರಿಣಾಮಗಳನ್ನು ಬೀರುತ್ತವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳನ್ನು ದಾಖಲಿಸುವುದೂ ಇಲ್ಲ.
ಸಿಸೇರಿಯನ್ ಸೆಕ್ಷನ್‌ಗಳು ಯುವ ತಾಯಂದಿರು ತಮ್ಮ ಸಾಮಾನ್ಯ ಜೀವನಕ್ಕೆ ಹಿಂತಿರುಗುವುದನ್ನು ತಡವಾಗಿಸುತ್ತದೆ ಮಾತ್ರವಲ್ಲದೆ ಮುಂದಿನ ಗರ್ಭಾವಸ್ಥೆಯ ಸಂಧರ್ಭದಲ್ಲಿ ಜೀವನ ಪರ್ಯಂತ ತೊಡಕುಗಳಿಗೆ ಕಾರಣವಾಗ ಬಹುದು. 25-35 ವರ್ಷದೊಳಗಿನ ವಯೋಗುಂಪುಗಳಲ್ಲಿಯೂ ಸಹ ಹಿಸ್ಟೆರೆಕ್ಟೊಮಿಗಳನ್ನು ಮಾಡಲಾಗುತ್ತಿದೆ. ಇದು ಶೀಘ್ರ ಋತುಸ್ರಾವ (ಮುಟ್ಟು) ನಿಲ್ಲುವಿಕೆ, ಆಸ್ಟಿಯೊಪೊರೋಸಿಸ್, ದೈಹಿಕ ನೋವು, ಖಿನ್ನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ವ್ಯವಸ್ಥೆಯು ಮಹಿಳೆಯರ ಜೀವದ ವಿಷಯದಲ್ಲಿ ಎಂತಹ ನಿಷ್ಟುರತೆಯನ್ನು ಹೊಂದಿದೆ ಎಂಬುದನ್ನು ಡಾ. ವೀಣಾ ಸೂಚಿಸುತ್ತಾರೆ.
Importance of nutrition as a social determinant of health – ಆರೋಗ್ಯದ ಸಾಮಾಜಿಕ ನಿರ್ಣಾಯಕವಾಗಿ ಪೌಷ್ಟಿಕತೆಯ ಪ್ರಾಮುಖ್ಯತೆ – ಬಹುತ್ವಕ್ಕಾಗಿ ವೈದ್ಯರು
Speaker: Dr. Sylvia Karpagam – a public health doctor and researcher working in Karnataka
Description: She talks about how stunting, undernutrition, anemia and other nutritional deficiencies can cause serious health consequences for children.
During the pandemic, the breakdown of social security schemes along with loss of wages was further aggravated by the cattle slaughter bans and resistance of eggs in the mid-day meal scheme in schools.
Nutrient dense foods are being denied based on caste, religion and ideology. Science and culture should be the basis for nutrition policies in the state.
ಮಾತನಾಡುವವರು: ಡಾ. ಸಿಲ್ವಿಯಾ ಕರ್ಪಗಂ – ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ ಆರೋಗ್ಯ ವೈದ್ಯರು ಮತ್ತು ಸಂಶೋಧಕರು.
ವಿವರಣೆ: ಬೆಳವಣಿಗೆ ಕುಂಠಿತ, ಅಪೌಷ್ಟಿಕತೆ, ರಕ್ತಹೀನತೆ (ಅನೀಮಿಯ), ಹಾಗೂ ಇನ್ನಿತರ ಪೌಷ್ಟಿಕಾಂಶ ಕೊರತೆಗಳು ಹೇಗೆ ಮಕ್ಕಳ ಆರೋಗ್ಯದ ಮೇಲೆ ಗಂಭಿರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರ ಕುರಿತು ಇವರು ಮಾತನಾಡುತ್ತಾರೆ. ಕೋರೋನಾ ಸಾಂಕ್ರಮಿಕದ ಸಂಧರ್ಭದಲ್ಲಿ ವೇತನ ನಷ್ಟದ ಜೊತೆಗೆ ಉಂಟಾದ ಸಾಮಾಜಿಕ ಭದ್ರತಾ ಯೋಜನೆಗಳ ಕುಂಠಿತವು ಜಾನುವಾರು ಹತ್ಯೆ ನಿಷೇಧ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಮೊಟ್ಟೆಯನ್ನು ನೀಡುವುದಕ್ಕೆ ವಿರೋಧದೊಂದಿಗೆ ಮತ್ತಷ್ಟು ಗಂಭೀರವಾಗಿದೆ.
ಜಾತಿ, ಧರ್ಮ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವುದನ್ನು ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿನ ಪೌಷ್ಟಿಕಾಂಶ ನೀತಿಗಳಿಗೆ ವಿಜ್ಞಾನ ಮತ್ತು ಪುರಾವೆಗಳು ಆಧಾರವಾಗಿರಬೇಕು.
Discrimination, labour law violations ,occupational hazards in health – ಆರೋಗ್ಯ ವ್ಯವಸ್ಥೆಯೊಳಗೆ ತಾರತಮ್ಯ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಹಾಗೂ ಔದ್ಯೋಗಿಕ ಅಪಾಯಗಳು – ಬಹುತ್ವಕ್ಕಾಗಿ ವೈದ್ಯರು
Speaker: Dr. Sylvia Karpagam is a public health doctor and researcher who works in Karnataka.
Description: She talks about how the Covid pandemic threw up discrimination within and by the health system.
Occupational hazards, labour law violations and harassment of the dalit community employed in sanitation work by the healthcare system became very visible during the Covid pandemic.
Medical education is itself discriminatory against doctors from dalit and Muslim communities and this is evident even on social media.
Nurses, ASHA workers and paramedical workers who are the backbone of the healthcare system are also taken on contract and face labour law violations.
ಮಾತನಾಡುವವರು: ಡಾ. ಸಿಲ್ವಿಯಾ ಕರ್ಪಗಂ – ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮುದಾಯಿಕ ಆರೋಗ್ಯ ವೈದ್ಯರು ಮತ್ತು ಸಂಶೋಧಕರು.
ವಿವರಣೆ: ಕೋವಿಡ್ ಸಾಂಕ್ರಮಿಕವು ಆರೋಗ್ಯ ವ್ಯವಸ್ಥೆಯೊಳಗೆ ಹಾಗೂ ಆರೋಗ್ಯ ವ್ಯವಸ್ಥೆಯಿಂದ ಹೇಗೆ ತಾರತಮ್ಯವನ್ನು ಉಂಟು ಮಾಡಿತು ಎಂಬುದರ ಕುರಿತು ಇವರು ಮಾತನಾಡುತ್ತಾರೆ.
ಆರೋಗ್ಯ ವ್ಯವಸ್ಥೆಯು ಉಂಟು ಮಾಡಿದ ಔದ್ಯೋಗಿಕ ಅಪಾಯಗಳು, ಕಾರ್ಮಿಕ ಕಾನೂನು ಉಲ್ಲಂಘನೆಗಳು ಹಾಗೂ ನೈರ್ಮಲ್ಯ ಕಾರ್ಯವನ್ನು ಮಾಡುತ್ತಿದ್ದ ದಲಿತ ಸಮುದಾಯದ ಮೇಲೆ ಎಸಗಿದ ದೌರ್ಜನ್ಯಗಳು ಕೋವಿಡ್ ಸಂದರ್ಭದಲ್ಲಿ ಗೋಚರವಾದವು. ವೈದ್ಯಕೀಯ ಶಿಕ್ಷಣ ಎಂಬುದೇ ತಾರತಮ್ಯದಿಂದ ಕೂಡಿದ್ದು ಮುಸ್ಲಿಂ ಮತ್ತು ದಲಿತ ಸಮುದಾಯಗಳ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯಕಾರಿಯಾಗಿದೆ ಹಾಗೂ ಇದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.
ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾದ ದಾದಿಯರು, ಆಶಾ ಕಾರ್ಯಕರ್ತೆಯರು ಹಾಗೂ ಅರೆವೈದ್ಯಕೀಯ ಸಿಬ್ಬಂಧಿಯನ್ನು ಒಪ್ಪಂದದ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ ಹಾಗೂ ಇವರು ಕಾರ್ಮಿಕ ಕಾನೂನು ಉಲ್ಲಂಘನೆಗಳನ್ನು ಎದುರಿಸುತ್ತಿದ್ದಾರೆ.
Health system must be responsive to the health situation in Karnataka – ಕರ್ನಾಟಕದಲ್ಲಿನ ಆರೋಗ್ಯ ಸನ್ನಿವೇಶಕ್ಕೆ ಅಅ ಆರೋಗ್ಯ ವ್ಯವಸ್ಥೆಯು ಸ್ಪಂದಿಸುವಂತಿರಬೇಕು – ಬಹುತ್ವಕ್ಕಾಗಿ ವೈದ್ಯರು
Speaker: Dr Gopal Dabade is based in Dharwad and is the founder member of Jagruti, http://www.jagruti.org/) Drug Action Forum – Karnataka
( https://daf-k.blogspot.com/) and Convener of All India Drug Action Network (AIDAN- https://aidanindia.wordpress.com/)
Description: He shares his concerns about the health indicators in the state and how health has to be comprehensive, affordable and accessible.
Research shows that women have not received even minimum antenatal care. He shares that malnutrition, especially in North Karnataka has not received due attention in spite of evidence of severity.
Malnutrition can contribute to reduced immunity, productivity, other infections, and poor performance in schools.
Public private partnership of health services come with a profit orientation rather than public health.
ಮಾತನಾಡುವವರು: ಡಾ. ಗೋಪಾಲ್ ದಾಬಡೆ ಅವರು ಧಾರವಾಡದಲ್ಲಿ ನೆಲೆಸಿದ್ದಾರೆ ಹಾಗೂ ಜಾಗೃತಿ (http://www.jagruti.org/) ಡ್ರಗ್ ಆಕ್ಷನ್ ಫೋರಂ-ಕರ್ನಾಟಕ ದ ಸಂಸ್ಥಾಪಕ ಸದಸ್ಯರು (https://daf-k.blogspot.com/) ಆಲ್ ಇಂಡಿಯಾ ಡ್ರಗ್ ಆಕ್ಷನ್ ನೆಟ್ವರ್ಕ್ (https://aidanindia.wordpress.com/) ನ ಸಂಚಾಲಕರಾಗಿದ್ದಾರೆ.
ವಿವರಣೆ: ರಾಜ್ಯದಲ್ಲಿನ ಆರೋಗ್ಯ ಸೂಚಕಗಳ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ ಹಾಗೂ ಹೇಗೆ ಆರೋಗ್ಯ ಎನ್ನುವುದು ಸಮಗ್ರ, ಕೈಗೆಟಕುವ, ಸುಲಭಸಾಧ್ಯವಾಗಿರಬೇಕು ಎಂಬ ಕುರಿತು ಮಾತನಾಡುತ್ತಾರೆ. ಮಹಿಳೆಯರು ಕನಿಷ್ಟ ಪ್ರಸವಪೂರ್ವ ಆರೈಕೆಯನ್ನು ಪಡೆದಿರುವುದಿಲ್ಲ ಎಂದು ಸಂಶೋಧನೆಗಳು ಹೇಳುತ್ತವೆ. ಉತ್ತರ ಕರ್ನಾಟಕದಲ್ಲಿ ಗಂಭೀರ ಸ್ವರೂಪದ್ದಾಗಿದ್ದರೂ ಸಹ ಅಪೌಷ್ಟಿಕತೆ ಎಂಬ ಸಮಸ್ಯೆಯು ಗಮನ ಸೆಳೆದಿರುವುದಿಲ್ಲ ಎಂಬುದನ್ನು ಇವರು ಹಂಚಿಕೊಳ್ಳುತ್ತಾರೆ.
ಅಪೌಷ್ಟಿಕತೆಯು ರೋಗ ನಿರೋಧಕ ಶಕ್ತಿಯನ್ನು ಕುಂದಿಸುವುದು, ಉತ್ಪಾದಕತೆಯನ್ನು ಕುಂದಿಸುವುದರ ಜೊತೆಗೆ ಇನ್ನಿತರ ಸೋಂಕುಗಳಿಗೆ ಕಾರಣವಾಗಿ ಶಾಲೆಗಳಲ್ಲಿ ಕಳಪೆ ಪ್ರದರ್ಶನಕ್ಕೆ ಕಾರಣವಾಗುತ್ತದೆ. ಆರೋಗ್ಯ ಸೇವೆಗಳಲ್ಲಿನ ಸಾರ್ವಜನಿಕ ಖಾಸಗಿ ಪಾಲುದಾರಿಕೆಗಳು ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸುವ ಬದಲಿಗೆ ಲಾಭವನ್ನು ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿವೆ.
